Ratings1
Average rating5
ಈ ಕಾದಂಬರಿ ಒಂದು ಸ್ವಾತಂತ್ರಪೂರ್ವ ಸಂಸಾರದ ಮೂರು ತಲೆಮಾರುಗಳ ಬಗ್ಗೆ ಕಥೆಯನ್ನು ಒಳಗೊಂಡಿದೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ, ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ, ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು ಹೊರಗಿನ ಕೆಲಸ ಕಾರ್ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಖ್ಯಾನವಿದೆ. ಒಂದು ಶತಕದಷ್ಟು ಹಿಂದಿನ ಪುಸ್ತಕವಾದರೂ, ಇದರಲ್ಲಿ ಎತ್ತಿ ಹಿಡಿದಂತಹ ವಿಚಾರಗಳು, ಮೌಲ್ಯಗಳು, ಸಮಸ್ಯೆಗಳು, ತರ್ಕ ತಾಕಲಾಟಗಳು ಇಂದಿಗೂ ಪ್ರಸ್ತುತವೇ ಆಗಿವೆ. ಓದಬೇಕಾದಂತ ಒಂದು ಉತ್ತಮ ಕಾದಂಬರಿ.
Reviews with the most likes.
There are no reviews for this book. Add yours and it'll show up right here!